ಆಮೂದಾರ್ಯ-
ಮಧ್ಯ ಏಷ್ಯಾದ ಅತಿ ದೊಡ್ಡ ನದಿಗಳಲ್ಲೊಂದು (1500 ಮೈಲು). ಹಿಂದೆ ಆಕ್ಸಸ್ ನದಿ ಎಂದು ಕರೆಯುತ್ತಿದ್ದರು. ಪರ್ಷಿಯಾದ ಪ್ರಾಚೀನ ಇತಿಹಾಸದಲ್ಲೂ ಅಲೆಕ್ಸಾಂಡರನ ದಂಡಯಾತ್ರೆಯಲ್ಲೂ ಇದಕ್ಕೆ ಪ್ರಾಶಸ್ತ್ಯ ದೊರೆತಿದೆ. ಉಗಮಸ್ಥಾನ ತಜಕಿಸ್ಥಾನದ ಮತ್ತು ಉತ್ತರ ಆಫ್ಘಾನಿಸ್ಥಾನದ ನಡುವಣ ಪರ್ವತಶ್ರೇಣಿ. ಆರಲ್ ಸಮುದ್ರವನ್ನು ಸೇರುತ್ತದೆ. ಅನೇಕ ಉಪನದಿಗಳಿವೆ. ನದಿಯ ಅರ್ಧಭಾಗ ಪರ್ವತ ಪ್ರದೇಶದಲ್ಲಿದೆ. ಉಳಿದ ಅರ್ಧಭಾಗ ವಿಶಾಲವಾದ ಮೈದಾನ ಪ್ರದೇಶದಲ್ಲಿದೆ (18,000ಚ.ಮೈ.) ಇದರಿಂದ ಸುಮಾರು 15ಲಕ್ಷ ಎಕರೆಗಳಷ್ಟು ಪ್ರದೇಶ ನೀರಾವರಿ ಸೌಲಭ್ಯವನ್ನು ಪಡೆದಿದೆ. ಅದರಲ್ಲಿ 60%ಭಾಗ ನದೀಮುಖಜ ಭೂಮಿಯಲ್ಲೇ ಇದೆ.										
(ಎಂ.ಎಸ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ